5/28/2014

ಜಲಧಾರೆ ಮತ್ತು ಕ್ಷಾಮ


BBC ಯ how earth made us ಅನ್ನೋ science documentary series ನಲ್ಲಿ  ಜೀವಜಲ, ಭೂಗರ್ಭ, ವಾಯು,ಅಗ್ನಿ ಗಳು  ಹೇಗೆ  ಮಾನವನ ಇತಿಹಾಸದಲ್ಲಿ ಪ್ರಭಾವ ಬೀರಿದವು ಅನ್ನೋದನ್ನ ವಿವರಿಸಿದ್ದಾರೆ, ಯಾವುದೇ ಇತಿಹಾಸ ಪುಸ್ತಕದಲ್ಲಿ ಸಿಗಲಾರದ information ಸೆರೆಹಿಡಿದಿದ್ದಾರೆ.  ಪ್ರತಿಯೊಂದು topic ಕ್ಕೂ  ಸುಮಾರು ಒ೦ದೊ೦ದು ತಾಸಿನ ವೀಡಿಯೊಗಳವು.   ಕೇವಲ ನೀರಿನ ಒಂದು ತಾಸಿನ documentaryಗಾಗಿ ಅಕ್ಷರ ಸಹ ಜಗತ್ತಿನ ಮೂಲೆ ಮೂಲೆ ಸುತ್ತಿದ್ದಾರೆ.  ಸಹಾರಾ desert ನಲ್ಲಿ,ಈಜಿಪ್ತ ನಲ್ಲಿ ,ಚಿರಾಪುಂಜಿ ಸೇರಿದಂತೆ ಭಾರತದ ಕೆಲವು ಪ್ರದೇಶಗಳಲ್ಲಿ, ಜಗತ್ತಿನ ಅತಿ ದೊಡ್ಡ ಹಿಂದೂ ದೇವಾಲಯದಲ್ಲಿ (ಕಾಂಬೋಡಿಯಾ) ,ಸಾಗರ- ನದಿಗಳಲ್ಲಿ, ಭೂಗರ್ಭದ ಆಳದ ಅಂತರ್ಜಲದಲ್ಲಿ, ಆಕಾಶದ ಎತ್ತರದಲ್ಲಿ, ಸಮುದ್ರದ ನೀರು ಆವಿಯಾಗುವಲ್ಲಿ, ಸಂಪೂರ್ಣ ಮಂಜುಗಡ್ಡೆಯನ್ನೇ ಹೊದ್ದು ಮಲಗಿರೋ ಹಿಮ ಭೂಮಿಯಲ್ಲಿ ಸುತ್ತಾಡಿ ನೀರಿನ ಎಲ್ಲ ರೂಪಗಳನ್ನು, ಅದರ complete cycle ಅನ್ನು,ಅದು ಹೇಗೆ ಮಾನವನನ್ನು ಆವರಿಸಿದೆ, ಹೀಗೆ ನೀರಿನ ಎಲ್ಲಾ dimensionಗಳನ್ನು ವಿವರಿಸುವ complete, detailed, ಅದ್ಬುತ documentary ಅದು.



ವಾಸ್ತವಕ್ಕೆ ಬರೋದಾದರೆ, ರಾಜ್ಯದಲ್ಲಿ ಸುಮಾರು ೧೨೫ ತಾಲೂಕುಗಳನ್ನು ಬರಪೀಡಿತ ಎಂದು ಕೇಂದ್ರ ಘೋಷಿಸಿದೆ. ಎಷ್ಟೋ ಕಡೆ ಕುಡಿಯೋ ನೀರಿಗೂ ಬರ, ಮೈಲಿಗಟ್ಟಲೆ ಅಲೆದು ನೀರು ತರಬೇಕು. ಇನ್ನು ಕೆಲವು ಕಡೆ ನೀರು ಸಿಕ್ಕರೂ ಅದು ಕಲುಷಿತ, soap detergent ನಂಥ chemicals ನಿಂದ ಹಿಡಿದು ಆರ್ಸೆನಿಕ್, endosalfan(google endosalfan) ಗಳಂಥ ವಿಷಕಾರಿಗಳು ಬೆರತಿವೆ. ಬೇರೆ ದಾರಿ ಇಲ್ಲದೆಯೋ  ಅಥವಾ ಅರಿವಿಲ್ಲದೆಯೋ  ಜನ ಅದೇ ನೀರನ್ನು ಬಳಸುತ್ತಿದ್ದಾರೆ.

 ವರ್ಷದಿಂದ ವರ್ಷಕ್ಕೆ ಈ ಸಮಸ್ಯೆ ಗಂಭೀರವಾಗುತ್ತಾ ಹೋಗುತ್ತೆ.ಯಥಾ ಪ್ರಕಾರ   ಮಾದ್ಯಮಗಳು ಇದರ ಬಗ್ಗೆ ವರದಿ ಮಾಡುತ್ತವೆ, ಸರ್ಕಾರಗಳನ್ನು ದೂಷಿಸುತ್ತವೆ, ಕೆಲವು ಕಡೆ ಪ್ರತಿಭಟನೆಗಳು ನಡೆಯುತ್ತವೆ. ಸರ್ಕಾರವೇ ಈ ಬಗ್ಗೆ ಪರಿಹಾರ  ಕಂಡುಕೊಳ್ಳಲಿ ಎಂದು ಸುಖಾ ಸುಮ್ಮನೆ ನಮ್ಮ ಪಾಡಿಗೆ ನಾವು ಉಳಿದು ಬಿಡುತ್ತೇವೆ. Question is,being citizen of country, what is that we are doing.


ದೇಶದ ಸಾಮಾನ್ಯ ಪ್ರಜೆಯಾಗಿ ನಾನು ಏನು ಮಾಡಬಹುದು ಎಂದು ಯೋಚಿಸಬೇಕು. ಕೂತಿರೊ toilet ನಿಂದ ಹಿಡಿದು ಬಟ್ಟೆ,ಪಾತ್ರೆ, ವಾಹನ, ಮನೆ ಸ್ವಚ್ಛತೆ ಇತ್ಯಾದಿಗಳಲ್ಲಿ ನೀರು waste ಮಾಡ್ತಾ ಇದಿವಾ, ಮಾಡ್ತಾ ಇದ್ದರೆ please stop it. ನಮ್ಮ ಕಣ್ಣ ಮುಂದೆ ಎಲ್ಲೆಲ್ಲಿ ಅನಾವಶ್ಯಕವಾಗಿ ನೀರು ಪೋಲಾಗುತ್ತಿದೆ ಅದನ್ನು ನಿಯಂತ್ರಿಸಿ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನಮ್ಮ ನಮ್ಮ ಮನೆಯ ಛಾವಣಿಯ ಮೇಲೆ ಬಿದ್ದ ಮಳೆ ನೀರನ್ನು ಭೂಮಿಯ ಆಳಕ್ಕೆ ಇಂಗಿಸುವದಕ್ಕೆ ವ್ಯವಸ್ಥೆ ಮಾಡಬಹುದು. ಮೊನ್ನೆ parliament ನ ಸೆಂಟ್ರಲ್ hall ನಲ್ಲಿ ನರೇಂದ್ರ ಮೋದಿ ಭಾಷಣ ಮಾಡುವಾಗ  "125ಕೋಟಿ ಜನ ನಾವು, ಒಬ್ಬೊಬ್ಬರು ಒಂದೊ೦ದು ಹೆಜ್ಜೆ ಮುಂದೆ ನಡೆದರೆ ದೇಶ 125 ಕೊಟಿ ಹೆಜ್ಜೆ ಮುಂದೆ ಹೋಗುತ್ತೆ" ಎಂದಿದ್ದರು. ಮೋದಿ ಹೇಳಿರೊ, ನಾವು ತೆಗೆದುಕೊಳ್ಳಬೇಕಾದ step ಗಳು ಇವೆ. ಇಂತಹ ಚಿಕ್ಕ ಚಿಕ್ಕ action ಗಳೇ ದೊಡ್ಡದೊಂದು impact create ಮಾಡಲು ಸಾಧ್ಯ. ಕೇವಲ ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ, government ಗೆ ನಾಗರಿಕರಾದ ನಾವೂ ಸಾಥ ಕೊಡಬೇಕು.

ಅದೇ ಭಾಷಣದಲ್ಲಿ ಮೋದಿ ಒಂದು ಕಡೆ ಹೀಗೆ ಹೇಳುತ್ತಾರೆ "ಹಿಂದೆ ಹೋದ governmentಗಳು ಏನನ್ನು ಮಾಡಿಲ್ಲ  ಎಂದು, ನಾನಾಗಲಿ ನನ್ನ ಪಕ್ಷವಾಗಲಿ ಒಪ್ಪುವದಿಲ್ಲ. ಎಲ್ಲರೂ ಅವರ ಕೈಲಾದ effort ಮಾಡಿದ್ದಾರೆ."  ಅಪ್ಪಟ ಸತ್ಯವಾದ ಮಾತು. ನನ್ನ ಊರಿನಲ್ಲಿ, ನಾನು ಚಿಕ್ಕವನಿದ್ದಾಗ ಬೇಸಿಗೆಗಳಲ್ಲಿ, ನೀರಿನ ಸಮಸ್ಯೆ ಯಾವ ಪರಿ ಇತ್ತೆಂದರೆ,    ಕುಡಿಯೊದಕ್ಕೂ ನೀರು ಸಿಗುತ್ತಿರಲಿಲ್ಲ, ಸರ್ಕಾರವೇ tankerಗಳಲ್ಲಿ ನೀರು ಪೂರೈಸುತ್ತಿತ್ತು . ಆದರೆ ಕ್ರಮೇಣ ಊರಿನಲ್ಲಿರೋ ಕೆರೆ ಅಭಿವೃದ್ದಿ  ಮಾಡಲಾಗಿದೆ.ದೂರದ ಕೃಷ್ಣೆ ಯಿಂದ ನೀರು ತರೋ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನಲ್ಲೆಲ್ಲ canal ಗಳನ್ನು ನಿರ್ಮಿಸಲಾಗಿದೆ, ಕೃಷಿಗೆ ನೀರು ಒದಗಿಸಲಾಗಿದೆ. To some extent ಸರ್ಕಾರಗಳು ಕೆಲಸ ಮಾಡಿವೆ.




ಮಾಧ್ಯಮಗಳು ಸಹ ಸರ್ಕಾರಗಳನ್ನು ತೀರಾ ವಿಲನ್ ಗಳಂತೆ ಬಿಂಬಿಸದೆ,  ಅದು  ಮಾಡಿರೋ ಕೆಲಸಗಳನ್ನು appreciate ಮಾಡಿ, ಇನ್ನೂ ಜವಾಬ್ದಾರಿಯುತವಾಗಿ ಏನೇನು ಮಾಡಬೇಕು ಎಂದು ತೋರಿಸಬೇಕು. ನೀರು ಮಾಲಿನ್ಯವಾಗದ೦ತೆ ಏನು ಮಾಡಬೇಕು, ವಿವೇಚನೆಯಿಂದ ಹೇಗೆ ಬಳಸಬೇಕು, ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ ಎಂಬಂಥ awareness ಅನ್ನು ಜನರಲ್ಲಿ  ಮೂಡಿಸೋ ಕೆಲಸ ಮಾಡಬೇಕು.

At the end of day, ಅತ್ಯಂತ ದೊಡ್ಡ ಜವಾಬ್ದಾರಿ ಸರ್ಕಾರವೇ ಹೊರಬೇಕು. ಈಗಿರುವ ನಮ್ಮ ಸಮಸ್ಯೆಗಳಿಗೆ ಕಾರಣ, ಕಳೆದುಹೋದ ದಿನಗಳಲ್ಲಿ ಅವುಗಳನ್ನು ಸರಿಯಾಗಿ address ಮಾಡದೇ ಇರುವದು. ಕೇವಲ ತಾತ್ಕಾಲಿಕ ಪರಿಹಾರಗಳ ಬಗ್ಗೆ ಯೋಚಿಸದೆ, 20 ವರ್ಷಗಳ ನಂತರ ಬೆಂಗಳೂರಿನಂತಹ  ಮಾಹಾನಗರಗಳಿಗೆ ಎಷ್ಟು ನೀರು ಬೇಕಾಗುತ್ತೆ, ಬೇರೆ ಕಡೆ ಎಲ್ಲೆಲ್ಲಿ ನೀರಿನ ಅಭಾವ ಉಂಟಾಗಬಹುದು  ಎಂದು ಲೆಕ್ಕಾಹಾಕಿ, ಈಗಿನಿಂದಲೇ ಅದಕ್ಕೋಸ್ಕರ  ತಯಾರಿ ಮಾಡಿಕೊಳ್ಳಬೇಕು.  ಮಾಲಿನ್ಯ ನಿಯಂತ್ರಣ ಸೇರಿದಂತೆ, ಹನಿ ನೀರಾವರಿಗೆ ಪ್ರೋತ್ಸಾಹ, ದೊಡ್ಡ ದೊಡ್ಡ ನೀರಾವರಿ ಯೋಜನೆಗಳು, ಆಣೆಕಟ್ಟುಗಳು, ನದಿಗಳ ಜೋಡನೆಗಳಂಥ ಯೋಜನೆಗಳನ್ನು ಪ್ರಾಮಾಣಿಕವಾಗಿ ಸಾಕರಗೊಳಿಸಬೇಕು.

No comments:

Post a Comment